ರಿಪಬ್ಲಿಕ್ ಆಫ್ ಕುಗೆಲ್ ಮುಗೆಲ್

ವಿಯನ್ನಾ-ಆಸ್ಟ್ರಿಯ: 30 ಚದರ ಮೀಟರ್ ಇರುವ ಈ ಮನೆ ಜಗತ್ತಿನ ಅತ್ಯಂತ ಸಣ್ಣ ದೇಶ. ಇದು ಆಸ್ಟ್ರೀಯಾದ ರಾಜಧಾನಿ ವಿಯನ್ನಾದಲ್ಲಿದೆ. 1976ರಲ್ಲಿ ಕಲಾವಿದ ಎಡ್ವಿನ್ ಲಿಪ್ ಬರ್ಗರ್ ಗೋಳಾಕಾರದ ಮನೆ ನಿರ್ಮಿಸಲು ಮುಂದಾಗಿದ್ದ. ಆದರೆ, ಅಲ್ಲಿನ ಅಧಿಕಾರಿಗಳು ದುಂಡಗಿನ ಮನೆ ನಿರ್ಮಿಸಲು ಅವಕಾಶ ನೀಡಲು ನಿರಾಕರಿಸಿದರು. ಇದರಿಂದ ಸಿಟ್ಟಿಗೆದ್ದ ಎಡ್ವಿನ್ ಆಸ್ಟ್ರೀಯಾದಿಂದ ಬೇರ್ಪಟ್ಟು, ತನ್ನದು ಸ್ವಂತ ದೇಶ ರಿಪಬ್ಲಿಕ್ ಆಫ್ ಕುಗೆಲ್ ಮುಗೆಲ್ ಎಂದು ಘೋಷಿಸಿಕೊಂಡಿದ್ದ. ಅಷ್ಟಲ್ಲದೇ ಸುಮಾರು 650 ಜನರಿಗೆ ಅನಿವಾಸಿ ನಾಗರಿಕತ್ವವನ್ನು ನೀಡಿದ. ಪರಿಣಾಮವಾಗಿ ಈತನನ್ನು ಜೈಲಿಗೂ ಅಟ್ಟಲಾಗಿತ್ತು. ಪ್ರಸ್ತುತ ಈ ಮನೆ ಪ್ರವಾಸಿಗರ ಆಕರ್ಷಣೆಯಾಗಿ ಉಳಿದುಕೊಂಡಿದೆ.

ಚೈತ್ರ ಎಲ್ ಹೆಗಡೆ

Read Previous

ತಾಯ್ತನ ಎದುರುಗೊಳ್ಳುವ ಮೊದಲು ಈ ಎಲ್ಲ ವಿಚಾರಗಳು ನಿಮಗೆ ತಿಳಿದಿತ್ತೇ?

Read Next

ಫ್ರೀಲಾನ್ಸಿಂಗ್ ಆರಂಭಿಸುವ ಮುನ್ನ ಏನೆಲ್ಲಾ ಯೋಚಿಸಬೇಕು?

Most Popular