ಮಾರ್ಚ್ ಮ್ಯಾರಥಾನ್ – ಕಥೆಗಳಿಗೆ ಮುಕ್ತ ಆಹ್ವಾನ

ಪುಟ್ಟ ಕಥೆಗಳಿಂದಲೇ ಕಥಾಪ್ರಿಯರ ಮನಗೆಲ್ಲುತ್ತಿರುವ ಬಣ್ಣದಚಿಟ್ಟೆ ಕಥಾಗುಚ್ಛ ಹೊಸ ಪ್ರಯೋಗವೊಂದಕ್ಕೆ ತೆರೆದುಕೊಳ್ಳುತ್ತಿದೆ. ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಈ ಸುಸಂದರ್ಭದಲ್ಲಿ ಮಾರ್ಚ್ ತಿಂಗಳಿನಲ್ಲಿ ಯುವ ಬರಹಗಾರರ ಕಥೆಗಳಿಗೆ ವೇದಿಕೆಯಾಗಲು ನಿರ್ಧರಿಸಿದೆ.

ನಿಮ್ಮ ಕಥೆಗಳು ಕೌತುಕಗಳಿಂದ ಕೂಡಿದ್ದರೂ ಸರಿ, ರೋಮಾಂಚಕ ಕಥೆಗಳಾದರೂ ಸರಿ ಅಥವಾ ತಿಳಿ ಹಾಸ್ಯವನ್ನು ಒಳಗೊಂಡಿದ್ದರೂ ಸರಿ. ಒಂದಿಷ್ಟು ಭಾವನೆಗಳೊಂದಿಗೆ ತಿರುವುಗಳನ್ನು ಪಡೆದುಕೊಳ್ಳುತ್ತಾ ಕಥಾಪ್ರಿಯರನ್ನು ಮನಗೆಲ್ಲವಂತಿದ್ದರೆ, ನಿಮ್ಮ ಸುಂದರ ಬರಹಗಳಿಗೆ ಬಣ್ಣದಚಿಟ್ಟೆ ಧ್ವನಿಯಾಗಲಿದೆ. 

ನಿಯಮಾವಳಿ

  • ಸ್ವರಚಿತ ಕಥೆಯಾಗಿರಬೇಕು
  • 300-400 ಪದಗಳ ಮಿತಿಯೊಳಗಿರಬೇಕು
  • ಯಾವುದೇ ಮಾಧ್ಯಮದಲ್ಲೂ ಪ್ರಕಟವಾಗಿರಬಾರದು
  • ಲೇಖಕರ ಕಿರುಪರಿಚಯವಿರಬೇಕು
  • ಛಾಯಾಚಿತ್ರವೂ ಜೊತೆಗಿದ್ದರೆ ಒಳಿತು
  • ಯಾವುದೇ ವಯೋಮಿತಿ ಇಲ್ಲ ಕಥೆ
  • ಕಳುಹಿಸಲು ಕೊನೆಯ ದಿನ ಮಾರ್ಚ್ 1, 2022
  • ಮಿಂಚಂಚೆಯ ಮೂಲಕವೇ ಕಥೆ ಕಳುಹಿಸಬೇಕು

ಕಥೆಯ ಆಯ್ಕೆಯ ನಂತರದ ಪ್ರಕ್ರಿಯೆಗಳು

  • ಕಥೆ ಆಯ್ಕೆಯಾದ ಬಳಿಕ ಆಯಾ ಲೇಖಕರಿಗೆ ತಿಳಿಸಲಾಗುವುದು
  • ನಿಮ್ಮ ಕಥೆಯನ್ನು ಸೋಷಿಯಲ್ ಮೀಡಿಯಾದಲ್ಲೂ ಪ್ರಕಟಿಸಲಾಗುವುದು.  

ಕಥೆ ಕಳುಹಿಸಬೇಕಾದ ಇಮೇಲ್ ವಿಳಾಸ: contact.bannadachitte@gmail.com

ಕಥೆಗಳ ಆಯ್ಕೆಯ ಅಂತಿಮ ತೀರ್ಮಾನ ಬಣ್ಣದಚಿಟ್ಟೆ ಸಂಪಾದಕರ ಮಂಡಳಿಯದ್ದಾಗಿರುತ್ತದೆ. ಆಯ್ದ ಕಥೆಗಳು ಬಣ್ಣದಚಿಟ್ಟೆ ಕಥಾಗುಚ್ಛ ಯುಟ್ಯೂಬ್ ಚಾನೆಲ್ಲಿನಲ್ಲಿ ಪ್ರಕಟಗೊಳ್ಳಲಿದೆ. ಪ್ರಕಟಗೊಂಡ ಕಥೆಗಳಿಗೆ ಮಾತ್ರ ಗೌರವಧನ ನೀಡಲಾಗುವುದು.

ಇದಿಷ್ಟು ಮಾರ್ಚ್ ಮ್ಯಾರಥಾನಿನ ಕುರಿತಾಗಿರುವ ಮಾಹಿತಿ. ಇನ್ನು ತಡ ಯಾಕೆ, ನಿಮ್ಮ ಯೋಚನಾ ಲಹರಿಯನ್ನು ಹರಿಯ ಬಿಡಿ. ನಿಮ್ಮ ಮನಸಿಗೆ ಮುದ ನೀಡುವ ಕಥೆಯೊಂದನ್ನು ನಮಗೆ ಕಳುಹಿಸಿ. 

 

ಚೈತ್ರ ಎಲ್ ಹೆಗಡೆ

Read Previous

ಫಲಿತಾಂಶ – Phalitamsha

Read Next

ಮಲ್ಲಿಗೆ ಹೂವಿನ ಪ್ರೇಮ – Mallige Huvina prema

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular