ಅಸ್ಟ್ರೋನೊಮಿಕಲ್ ಗಡಿಯಾರ

ಪ್ರಾಗ್-ಚೆಕ್ ರಿಪಬ್ಲಿಕ್: ಇದು ಚೆಕ್ ರಿಪಬ್ಲಿಕ್ ದೇಶದ ರಾಜಧಾನಿ ಪ್ರಾಗ್ ಅಲ್ಲಿರುವ ಅಸ್ಟ್ರೋನೊಮಿಕಲ್ ಗಡಿಯಾರ. ಜಗತ್ತಿನಲ್ಲಿರುವ ಅತ್ಯಂತ ಮೂರನೇ ಹಳೆಯ ಗಡಿಯಾರ. ಮಾಸ್ಟರ್ ಹನುಸ್ 1410ರಲ್ಲಿ ತಯಾರಿಸಿದ್ದರು. ಈ ಗಡಿಯಾರದ ವಿಶೇಷತೆ ಎಂದರೆ ಸಮಯ, ಸೂರ್ಯ ಮತ್ತು ಚಂದ್ರರ ಪಥ, ರಾಶಿ ಸೇರಿದಂತೆ  ಹಲವು ಮಾಹಿತಿಯನ್ನು ನೋಡುಗರಿಗೆ ನೀಡುತ್ತದೆ. ಪ್ರತಿ ತಾಸಿಗೊಮ್ಮೆ ಗಡಿಯಾರದ ಒಳಗಿನಿಂದ ಗೊಂಬೆಗಳೆಲ್ಲ ಬಂದು ನರ್ತಿಸುತ್ತವೆ. ಈ ಗಡಿಯಾರ ನಿರ್ಲಕ್ಷಿಸಿದರೆ ದೇಶಕ್ಕೆ ಕೆಡುಕಾಗುತ್ತದೆ ಎಂಬ ನಂಬಿಕೆ ಇದೆ. ಈ ನಡುವೆ ಗಡಿಯಾರ ತಯಾರಿಸಿದ ಮಾಸ್ಟರ್ ಹನುಸ್ ಮತ್ತೆಲ್ಲೂ ಇಂಥಹ ಇನ್ನೊಂದು ಗಡಿಯಾರ ತಯಾರಿಸದೇ ಇರಲಿ ಎಂದು ರಾತ್ರೋ ರಾತ್ರಿ ಅವರ ಕಣ್ಣುಗಳನ್ನು ಕೀಳಲಾಗಿತ್ತು ಎನ್ನಲಾಗುತ್ತದೆ.

ಚೈತ್ರ ಎಲ್ ಹೆಗಡೆ

Read Previous

ತಾಯ್ತನಕ್ಕೆ ಕಾದು ಕುಳಿತಾಗ ಮಾಡಬಹುದಾದ ಕೆಲಸಗಳು

Read Next

ಫ್ರೀಲಾನ್ಸಿಂಗ್ ಅದೆಷ್ಟು ಲಾಭ ಗೊತ್ತಾ?

Most Popular