ಪುಸ್ತಕ ಭಂಡಾರ

ಆಮಸ್ಟರ್‌ಡಾಮ್-ನೆದರ್‌ಲ್ಯಾಂಡ್:  ದೂರದಿಂದ ಜೇನುಗೂಡಿನಂತೆ ಕಾಣುವ ಈ ಪೆಟ್ಟಿಗೆ ಪುಸ್ತಕಗಳ ಉಚಿತ ಭಂಡಾರ. ಈ ಪುಟ್ಟ ಗ್ರಂಥಾಲಯ ನೆದರ್ಲ್ಯಾಂಡಿನ ಆಮಸ್ಟೆಲ್ ಪಾರ್ಕಿನಲ್ಲಿದೆ. ಪುಸ್ತಕ ಪ್ರೇಮಿ ಮ್ಯಾಕ್ಸ್ ಲುತಸ್ಲೇಗರ್ ನೆನಪಿನಲ್ಲಿ ಕಲಾವಿದ ರೀಸಯಾರ್ಟ್ ಬುಸ್ ನಿರ್ಮಿಸಿದ್ದಾರೆ. ಈ ಗ್ರಂಥಾಲಯದಲ್ಲಿ ಎಲ್ಲ ಭಾಷೆಗಳ ಪುಸ್ತಕಗಳಿಗೂ ಮುಕ್ತ ಅವಕಾಶ. ಈ ಲೈಬ್ರರಿ ವಿಶೇಷತೆಯೆಂದರೆ ಯಾರು ಬೇಕಾದರೂ ಪುಸ್ತಕಗಳನ್ನು ತಂದು ಇಡಬಹುದು. ಹಾಗೆಯೇ ಓದುವವರು ಉಚಿತವಾಗಿ ಪುಸ್ತಕಗಳನ್ನು ತೆಗೆದುಕೊಂಡು ಹೋಗಬಹುದು. ಇದೇ ರೀತಿಯಲ್ಲಿ ದೇಶದ ಹಲವೆಡೆ ಪುಟ್ಟ ಪುಟ್ಟ ಪುಸ್ತಕ ಭಂಡಾರದ ಪೆಟ್ಟಿಗೆಗಳಿವೆ.

ಚೈತ್ರ ಎಲ್ ಹೆಗಡೆ

Read Previous

ತಾಯ್ತನದಿಂದ ಬದುಕು ಹೇಗೆ ಬದಲಾಗುತ್ತೆ ಗೊತ್ತಾ?

Read Next

ಪ್ರತಿಭಾನ್ವಿತರಿಗೆ ಕೈತುಂಬ ಆದಾಯ ತಂದುಕೊಡುವ ಜಾಲತಾಣಗಳು

Most Popular