ಅನಾಮಿಕ – Anamika

ಅನಾಮಿಕ: ದಿನನಿತ್ಯ ಒಡನಾಟದಲ್ಲಿ ಅದೆಷ್ಟೋ ಅಪರಿಚಿತ ಮುಖಗಳು ಎದುರಾಗುತ್ತಿರುತ್ತವೆ. ಹಾಲಿನಂಗಡಿ, ದಿನಸಿ ಅಂಗಡಿ, ಬಸ್ ಸ್ಟಾಪ್ ಹೀಗೆ ಎಲ್ಲೆಡೆ ದಿನವೂ ಒಂದೊಂದು ಮುಖಗಳು ಕಾಣುವುದು ಸಹಜ. ಆದರೆ, ತಿಳಿದೋ ತಿಳಿಯದೆಯೋ ಆ ಅಪರಿಚಿತ ಮುಖಗಳ ಕುರಿತು ಒಂದಿಷ್ಟು ಪೂರ್ವಾಗ್ರಹ ಕಲ್ಪನೆಗಳು ಮನದಲ್ಲಿ ಮೂಡಿರುತ್ತವೆ. ಅಪರಿಚಿತ ಮುಖಗಳೊಂದಿಗೆ ಒಡನಾಡದೇ ಒಳ್ಳೆಯವರು, ಕೆಟ್ಟವರು ಎಂಬೆಲ್ಲ ಪಟ್ಟವನ್ನು ಮನಸು ಕಟ್ಟಿಬಿಡುತ್ತದೆ. ಸದಾ ಬಸ್ ಸ್ಟಾಪಿನಲ್ಲಿ ಭೇಟಿಯಾಗುವ ಅನಾಮಿಕನಿಂದ ಸನ್ನಿಧಿ ಹೆದರಿದ್ದಾಳೆ. ಆತನಿಂದ ತಪ್ಪಿಸಿಕೊಂಡು ದೂರ ಓಡಲು ಹವಣಿಸುತ್ತಿದ್ದಾಳೆ. ಆ ಅನಾಮಿಕ ಸನ್ನಿಧಿಗೆ ಮಾಡಿದ್ದಾದರೂ ಏನು? ನಿಜಕ್ಕೂ ಸನ್ನಿಧಿ ತಪ್ಪಿಸಿಕೊಳ್ಳಲು ಯಶಸ್ವಿಯಾಗುತ್ತಾಳಾ ಎಂಬುದನ್ನು ಕೇಳಲು ಕಥೆ ಕೇಳಿ. ಬಳಿಕ ಅಭಿಪ್ರಾಯ ತಿಳಿಸಲು ಮರೆಯದಿರಿ.

ಚೈತ್ರ ಎಲ್ ಹೆಗಡೆ

Read Previous

ಪರದೆ ಸರಿದ ಮೇಲೆ – Parade Sarida Mele

Read Next

ಸಮ್ಮಿಲನ – Sammilana

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular